BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Bravegirl ಬಂಟ್ವಾಳದಲ್ಲಿ ವಿದ್ಯಾರ್ಥಿನಿಯ ಸಮಯಪ್ರಜ್ಞೆ ತಪ್ಪಿಸಿತ್ತು ಮತ್ತೊಂದು ಅನಾಹುತ...!


ಬಂಟ್ವಾಳ, ಜುಲೈ24:ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ ಪುಟ್ಟ ಮಕ್ಕಳಿದ್ದ ಶಾಲಾ ಬಸ್ ಮೇಲೆ ಮರ ಬಿದ್ದು ಒಂದು ಮಗುವಿನ ಜೀವಹಾನಿಯ ದುರಂತದ ಬೆನ್ನಲ್ಲೇ ವಿದ್ಯಾರ್ಥಿನಿಯೋರ್ವಳ ಸಮಯಪ್ರಜ್ಞೆಯಿಂದ ಮತ್ತೊಂದು ಅನಾಹುತ ತಪ್ಪಿದೆ. ಅಪಾಯಕಾರಿಯಾಗಿ ಅಲುಗಾಡುತ್ತಿದ್ದ ವಿದ್ಯುತ್ ಕಂಬದ ಕೆಳಗೆ ನಿಂತಿದ್ದ ಲಿಖಿತ್ ಎಂಬ ಬಾಲಕನನ್ನು ಕ್ಷಣಾರ್ಧದಲ್ಲಿ ಎಳೆದು ರಕ್ಷಿಸಿದ್ದಾಳೆ 9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ. 

ಬಂಟ್ವಾಳ ತಾಲೂಕಿನ ಬರಿಮಾರ್‌ ಸಮೀಪ ಕಲ್ಲೆಟ್ಟಿ ದೈವಸ್ಥಾನದ ಬಳಿ ಬುಧವಾರ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ 9ನೇ ತರಗತಿ ವಿದ್ಯಾರ್ಥಿನಿ ಶ್ರೇಯಾ ತನ್ನ ಅಕ್ಕಪಕ್ಕದ ಮಕ್ಕಳೊಂದಿಗೆ ಮರ ಬಿದ್ದ ಅದೇ ಶಾಲಾ ಬಸ್‌ನಿಂದ ಘಟನೆ ಆಗುವ ಮುಂಚೆಯೆ ಇಳಿದಿದ್ದಳು. 

 ಶ್ರೇಯಾ ಜೊತೆಗೆ ಬಸ್ಸಿನಿಂದ ಇಳಿದಿದ್ದ ಲಿಖಿತ್ ತನ್ನ ಶಾಲಾ ಬ್ಯಾಗನ್ನು ಅಣ್ಣನಿಗೆ ನೀಡಿ ಮನೆಯತ್ತ ಓಡಲು ಮುಂದಾಗಿದ್ದ. ಅಷ್ಟರಲ್ಲಿ ಭಾರೀ ಶಬ್ದ ಕೇಳಿಬಂದಿದ್ದು, ಸಮೀಪದ ವಿದ್ಯುತ್ ಕಂಬ ಅಪಾಯಕಾರಿಯಾಗಿ ಅಲುಗಾಡುತ್ತಿರುವುದನ್ನು ಗಮನಿಸಿದ ಶ್ರೇಯಾ ಕ್ಷಣಾರ್ಧದಲ್ಲಿ ಓಡಿ ಹೋಗಿ ಲಿಖಿತ್‌ನ ಕೈ ಹಿಡಿದು ಹಿಂದೆ ಎಳೆದಿದ್ದಾಳೆ. ಲಿಖಿತ್ ನಿಂತಿದ್ದ ಅದೇ ಸ್ಥಳಕ್ಕೆ ವಿದ್ಯುತ್ ಕಂಬ ಧರೆಗುರುಳಿದೆ. ಬಾಲಕಿ ಶ್ರೇಯಾಳ ಸಮಯಪ್ರಜ್ಞೆ ಮತ್ತೊಂದು ಜೀವಹಾನಿ ತಪ್ಪಿಸಿದೆ ಎಂದಿದ್ದಾರೆ ಸ್ಥಳೀಯರು. ತನ್ನ ಮಗನ ಪ್ರಾಣ ಉಳಿಸಿದ ಲಿಖಿತ್‌ನ ತಂದೆ ಕರುಣಾಕರ ಬಾಲಕಿಗೆ ಕೃತಜ್ಞತೆ ಸಲ್ಲಿಸಿದ್ದು, ಸಾರ್ವಜನಿಕರಿಂದಲೂ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.

ಬಂಟ್ವಾಳದಲ್ಲಿ ವಿದ್ಯಾರ್ಥಿನಿಯ ಸಮಯಪ್ರಜ್ಞೆತಪ್ಪಿಸಿತ್ತು ಮತ್ತೊಂದು ಅನಾಹುತ


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!