BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ರಾಜ್ಯ

Bengaluru ಬಸ್‌ ಪ್ರಯಾಣಿಕರೇ ಎಚ್ಚರ, ನಿಮ್ಮ ಮಧ್ಯೆ ಇಂಥವರೂ ಇರ್ತಾರೆ ಜಾಗರೂಕರಾಗಿರಿ..!!


ಬೆಂಗಳೂರು,ಜುಲೈ24: ಬಸ್‌ ಪ್ರಯಾಣಿಕರೇ ಎಚ್ಚರ, ನಿಮ್ಮ ಮಧ್ಯೆ ಇಂಥವರೂ ಇರ್ತಾರೆ ಜಾಗರೂಕರಾಗಿರಿ. ಹೌದು ರಾಜ್ಯ ರಾಜಧಾನಿಯಲ್ಲಿ ಬೆಂಗಳೂರಿನಲ್ಲಿ ಇಬ್ಬರು ಖತರ್ನಾಕ್ ಕಳ್ಳರನ್ನು ಪೊಲೀಸರು ಸತತ ಪ್ರಯತ್ನ ಮಾಡಿ ಬಲೆಗೆ ಹಾಕಿಕೊಂಡಿದ್ದಾರೆ. ವಾಂತಿ ಬರುತ್ತಿದೆ ಎಂದು ನೆಪವೊಡ್ಡಿ ಬಿಎಂಟಿಸಿ ಬಸ್​​ಗಳಲ್ಲಿ ವಿಂಡೋ ಸೀಟಿನಲ್ಲಿ ಕುಳಿತು ಪ್ರಯಾಣಿಸುವ ಪ್ರಯಾಣಿಕರನ್ನ ಗುರಿಯಾಗಿಸಿ ಈ ಇಬ್ಬರು ಖತರ್ನಾಕ್ ಕಳ್ಳರು ಕನ್ನ ಹಾಕುತ್ತಿದ್ದರು. ವಿಧಾನಸೌಧ ಠಾಣೆ ಪೊಲೀಸರು ಒಂದು ವಾರದ ಕಾರ್ಯಾಚರಣೆ ನಡೆಸಿ ಇವರನ್ನು ಬಂಧಿದ್ದಾರೆ.

ಕೆಂಗೇರಿಯ ಮುಬಾರಕ್ ಪಾಷಾ, ಜೆ.ಜೆ.ನಗರದ ಅನ್ವರ್ ಪಾಷಾ ಬಂಧಿತ ಆರೋಪಿಗಳು. ಕೃತ್ಯದಲ್ಲಿ ಇನ್ನೂ ಮೂವರು ಭಾಗಿಯಾಗಿರು ಮಾಹಿತಿ ಪೊಲೀಸರಿಗೆ ದೊರೆತಿದ್ದು ತಲೆಮರೆಸಿಕೊಂಡ ಇವರ ಬಂಧನಕ್ಕಾಗಿ ಶೋಧ ಮುಂದುವರೆದಿದೆ. 

ಬಿಎಂಟಿಸಿ ಬಸ್​ಗಳಲ್ಲಿ ವಿಂಡೊ ಸೀಟ್​​ನಲ್ಲಿ ಕುಳಿತು ಪ್ರಯಾಣಿಸುವ ಪ್ರಯಾಣಿಕರನ್ನು ಗುರಿಯಾಗಿಸಿಕೊಳ್ಳುತ್ತಿದ್ದ ಈ  ಆರೋಪಿಗಳು, ವಾಂತಿ ಬರುತ್ತಿದೆ‌ ಸೀಟು ಬಿಟ್ಟುಕೊಡುವಂತೆ ಗ್ಯಾಂಗ್ ಸದಸ್ಯ ಮನವಿ ಮಾಡುತ್ತಿದ್ದ. ಖದೀಮರ ಅಸಲಿಯತ್ತು ತಿಳಿಯದ ಪ್ರಯಾಣಿಕರು ಸೀಟು ಬಿಟ್ಟುಕೊಡುತ್ತಿದ್ದರು. ಪೂರ್ವಸಂಚಿನಂತೆ ಪ್ರಯಾಣಿಕರ ಸೋಗಿನಲ್ಲಿದ್ದ ಐವರು ಆರೋಪಿಗಳು, ರಶ್ ಇರುವಂತೆ ವರ್ತಿಸಿ ಪ್ರಯಾಣಿಕನ ಮೈ ಮೇಲೆ ಬೀಳುತ್ತಿದ್ದರು. ಈ ವೇಳೆ ಪ್ರಯಾಣಿಕರ ಜೀಬಿನಲ್ಲಿದ್ದ ಪರ್ಸ್ ಹಾಗೂ ನಗದು ಕಳ್ಳತನ ಮಾಡಿ ಸ್ಥಳದಿಂದ ಎಸ್ಕೇಪ್ ಆಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೇಂದ್ರ ವಿಭಾಗದ ವ್ಯಾಪ್ತಿಯಲ್ಲಿ ಪ್ರತ್ಯೇಕ ಎರಡು ಕಡೆಗಳಲ್ಲಿ ಖದೀಮರು ಕೈ ಚಳಕ ತೋರಿದ್ದರು. ಅಲ್ಲದೇ, ನಗರದ ವಿವಿಧ ಕಡೆಗಳಲ್ಲಿ ಕೃತ್ಯ ಎಸಗಿರುವ ಬಗ್ಗೆ ದೂರು ದಾಖಲಾದ ಹಿನ್ನೆಲೆಯಲ್ಲಿ ಎಲ್ಲ ಪ್ರಕರಣಗಳನ್ನ ವರ್ಗಾಯಿಸಿಕೊಂಡು ತನಿಖೆ ನಡೆಸಿದ ವಿಧಾನಸೌಧ ಪೊಲೀಸರು, ಒಂದು ವಾರ ಸತತ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!