BREAKING
ದಕ್ಷಿಣ ಕನ್ನಡ

Mangaluru ಮಂಗಳೂರು ಪಾಲಿಕೆ ಆಡಳಿತಾಧಿಕಾರಿ ಕಚೇರಿಗೆ ಮುತ್ತಿಗೆ ಯಶಸ್ವಿ, ಬೀದಿಬದಿ ವ್ಯಾಪಾರಿಗಳ ಧರಣಿ ಸುಖಾಂತ್ಯ


ಮಂಗಳೂರು, ಜುಲೈ10 : ಮಂಗಳೂರು ಪಾಲಿಕೆ ಆಡಳಿತಾಧಿಕಾರಿ ಕಚೇರಿಗೆ ಮುತ್ತಿಗೆ ಯಶಸ್ವಿಯಾಗಿದ್ದು ಕಳೆದ 24 ಗಂಟೆಗಳಿಂದ ನಡೆಯುತ್ತಿದ್ದ ಬೀದಿಬದಿ ವ್ಯಾಪಾರಿಗಳ ಧರಣಿ ಸುಖಾಂತ್ಯಗೊಂಡಿದೆ. 

 ಬೀದಿಬದಿ ವ್ಯಾಪಾರಿಗಳು ಸಂಡೆ ಬಜಾರ್ ಗೆ ಮುಕ್ತ ಅವಕಾಶ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ನಡೆಯುತ್ತಿದ್ದ 24ಗಂಟೆಗಳ ಧರಣಿ ಸತ್ಯಾಗ್ರಹ  ಪ್ರತಿಭಟನೆಗೆ ಬಂದು ಮನವಿ ಸ್ವೀಕರಿಸದ ನಗರ ಪಾಲಿಕೆ ಆಯುಕ್ತರ ವಿರುದ್ಧ ಆಕ್ರೋಶಗೊಂಡ ಪ್ರತಿಭಟನಾಕಾರರು ಧರಣಿ ಮುಕ್ತಾಯದ ಸಮಯ ಆಗಿತ್ತಿದ್ದಂತೆ ಪಾಲಿಕೆಯ ಮುಖ್ಯ ದ್ವಾರದ ಬಳಿ ಧರಣಿ ನಡೆಸುತ್ತಿದ್ದ ಸ್ಥಳದಿಂದ ತೆರಳಿ ನಗರ ಪಾಲಿಕೆ ಆಡಳಿತಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಜಿಲ್ಲಾಧಿಕಾರಿಗಳು ಬಾರದೆ ತೆರಳುವುದಿಲ್ಲ ಎಂದು ಪಟ್ಟು ಹಿಡಿದ ಬೀದಿ ವ್ಯಾಪಾರಿಗಳನ್ನು  ಸಮಾಧಾನಪಡಿಸಿದ ಪೊಲೀಸ್ ಅಧಿಕಾರಿಗಳು ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದರಾದರೂ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಲಭ್ಯ ಇಲ್ಲದ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಹೋರಾಟಗಾರನ್ನು ಭೇಟಿ ಮಾಡಿಸುವ ಭರವಸೆ ನೀಡಿದರು.

ಧರಣಿ ಅಂತ್ಯ, ಭಾನುವಾರದ ಸಂಡೆ ಬಜಾರ್ ತೆರವುಗೊಳಿಸಿದರೆ ಜೈಲ್ ಭರೋ ಎಚ್ಚರಿಕೆ:

ಕಳೆದ ಒಂದು ತಿಂಗಳಿನಿಂದ ಸಂಡೆ ಬಜಾರ್ ವ್ಯಾಪಾರಿಗಳು ವ್ಯಾಪಾರಕ್ಕೆ ಅವಕಾಶ ಸಿಗದೇ ಕಂಗಾಲಾಗಿದ್ದಾರೆ ಮತ್ತು ನಷ್ಟಕ್ಕೆ ಒಳಗಾಗಿದ್ದಾರೆ ಮುಂದಿನ ಭಾನುವಾರ ವ್ಯಾಪಾರಕ್ಕೆ ಅವಕಾಶ ನೀಡದೆ ಆಯುಕ್ತರು ಕಾರ್ಯಾಚರಣೆ ನಡೆಸಿದರೆ ಜೈಲ್ ಭರೋ ಹೋರಾಟ ಹಮ್ಮಿಕೊಳ್ಳುತ್ತೇವೆ ಎಂದು ದ.ಕ ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಂಘದ ಗೌರವಧ್ಯಕ್ಷರಾದ ಬಿ.ಕೆ ಇಮ್ತಿಯಾಜ್ ಹೇಳಿದರು.

ನಗರ ಪಾಲಿಕೆ ಪರ್ಯಾಯ ವ್ಯವಸ್ಥೆ ಆಗುವವರೆಗೆ ಯಥಾಸ್ಥಿತಿ ಕಾಪಾಡಬೇಕು ಎಂದು ಆಗ್ರಹಿಸಿದರು.ಸಂಘದ ಕಾರ್ಯಧ್ಯಕ್ಷರಾದ ಸುನಿಲ್ ಕುಮಾರ್ ಬಜಾಲ್ ಮಾತನಾಡಿ ಆಯುಕ್ತರು ಕಠೋರವಾಗಿ ಮತ್ತು ಉದ್ದಟತನದಿಂದ ವರ್ತಿಸುತ್ತಿದ್ದಾರೆ ಅವರು ಕಾನೂನು ರಿತಿಯಲ್ಲಿ ಕೆಲಸ ಮಾಡಬೇಕೆಂದು ಆಗ್ರಹಿಸಿದರು.

ಅಖಿಲ ಭಾರತ ವಕೀಲರ ಸಂಘದ ಅಧ್ಯಕ್ಷರಾದ ಯಶವಂತ ಮರೋಳಿ ರೈತ ಸಂಘದ ಮುಖಂಡರಾದ ಯಾದವ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್, ಶೇಖರ ಕುಂದರ್, ಸಿಐಟಿಯು ಮುಖಂಡರಾದ ಬಿ. ಎಂ ಭಟ್, ಯೋಗೀಶ್ ಜಪ್ಪಿನಮೊಗರು, ಜನವಾದಿ ಮಹಿಳಾ ಸಂಘಟನೆ ಮುಖಂಡೆ ಯೋಗಿತಾ ಸುವರ್ಣ, ಡಿವೈಎಫ್ಐ ಮುಖಂಡರಾದ ಸಂತೋಷ್ ಬಜಾಲ್, ತಯ್ಯುಬ್ ಬೆಂಗ್ರೆ, ಹನೀಫ್ ಬೆಂಗ್ರೆ, ಚರಣ್ ಶೆಟ್ಟಿ, ಮನೋಜ್ ಊರ್ವಸ್ಟೋರ್, ಆಜ್ಮಲ್ ಅಹ್ಮದ್, ಅಭಿಷೇಕ್ ಬೆಳ್ತಂಗಡಿ, ವಿನುಷ ರಮಣ ಭಟ್, ಪ್ರಶಾಂತ್ ಎಂ.ಬಿ ಊರ್ವಸ್ಟೋರ್,ಬೀದಿಬದಿ ವ್ಯಾಪಾರಿಗಳ ಮುಖಂಡರಾದ ಮುಜಾಫರ್ ಅಹ್ಮದ್ ಸಂತೋಷ್, ಸಿಕಂದರ್, ವಿಜಯ್, ನೌಶಾದ್ ಕಣ್ಣೂರು, ರಿಯಾಜ್ ಮದಕ ಶಿವಾನಂದ, ಪಕೀರ ನಾಯ್ಕ್, ಮಹೇಶ್, ಹನುಮಂತ, ಗಂಗಮ್ಮ, ಜ್ಯೋತಿ, ಲಕ್ಕಮ್ಮ, ಮಂಜುಳ, ಇಮ್ತಿಯಾಜ್ ಬಾಪು, ಗುಡ್ಡಪ್ಪ, ಶಿವಪ್ಪ, ಪ್ರದೀಪ್, ಅಸ್ಲಮ್, ಮಂಜುನಾಥ್, ಶಾಲಿನಿ ಮುಂತಾದವರು ಉಪಸ್ಥಿತರಿದ್ದರು.

ಬೀದಿ ವ್ಯಾಪಾರಿಗಳ ಸಮಸ್ಯೆ ಆಲಿಸಿದ ಅಪಾರ ಜಿಲ್ಲಾಧಿಕಾರಿ : 

ಜಿಲ್ಲಾಧಿಕಾರಿಗಳ ಸೂಚನೆಯಂತೆ ಅಪರ ಜಿಲ್ಲಾಧಿಕಾರಿ ಕೆ ರಾಜು ಅವರು ಮನವಿ ಸ್ವೀಕರಿಸಿ, ಬೀದಿ ವ್ಯಾಪಾರಿಗಳ ಸಮಸ್ಯೆ ಆಲಿಸಿ, ಸಮಸ್ಯೆ ಪರಿಹಾರ ಮಾಡುವ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ ಎಂದು ಹೇಳಿದರು. ಈ ಮೂಲಕ  ಕಳೆದ 24 ಗಂಟೆಗಳಿಂದ ನಡೆಯುತ್ತಿದ್ದ ಬೀದಿಬದಿ ವ್ಯಾಪಾರಿಗಳ ಧರಣಿ ಸುಖಾಂತ್ಯಗೊಂಡಿತು. 

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!