BREAKING
ಉಡುಪಿ

Udupi ಕಾರ್ಕಳ ಹೆಬ್ರಿ ಕೂಡ್ಲು ಫಾಲ್ಸ್‌ಗೆ ಸಾರ್ವಜನಿಕರಿಗೆ ನಿಷೇಧ

ಉಡುಪಿ, ಜುಲೈ 10 : ಉಡುಪಿ ಜಿಲ್ಲೆಯ ಕಾರ್ಕಳ ಹೆಬ್ರಿಯ ಪ್ರಸಿದ್ದ ಪ್ರವಾಸಿ ತಾಣ ಕೂಡ್ಲು ಫಾಲ್ಸ್‌ಗೆ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ನಿಷೇಧ ಹೇರಿ ಅರಣ್ಯ ಇಲಾಖೆ ಆದೇಶ ಹೊರಡಿಸಿದೆ. ಈ ಪ್ರದೇಶದಲ್ಲಿ ಮಳೆ ಮತ್ತು ನೀರಿನ ಹರಿವು ಹೆಚ್ಚಾಗಿರುವ ಕಾರಣ ಯಾವುದೇ ಅನಾಹುತಾಗಳು ಸಂಭವಿಸದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಇಲಾಖೆ ತಾತ್ಕಾಲಿಕ ನಿಷೇಧ ಹೇರಿದೆ. ಈ ತಾತ್ಕಾಲಿಕ ನಿಷೇಧ ಸೆಪ್ಟೆಂಬರ್ ಅಂತ್ಯದ ವರೆಗೂ ಜಾರಿಯಲ್ಲಿದ್ದು  ನೀರಿನ ಹರಿವು ಮತ್ತು ಮಳೆಯನ್ನು ಗಮನಿಸಿ ನಿಷೇಧ ಮುಂದುವರಿಕೆ ಮತ್ತು ಪ್ರವೇಶದ ಕುರಿತು ತೀರ್ಮಾನಿಸಲಾಗುವುದು ಎಂದು ಹೆಬ್ರಿ ವನ್ಯಜೀವಿ ವಿಭಾಗ ಮಾಹಿತಿ ನೀಡಿದೆ.  

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!