BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದೇಶ

Vietnam ವಿಯೆಟ್ನಾಂನ ದ್ವೀಪದ ಬಳಿ ಭಾರತೀಯ ಪ್ರವಾಸಿಗರ ಬೋಟ್ ಮುಳುಗಡೆ, 15 ಮಂದಿ ಮೃತ್ಯು,



ವಿಯೆಟ್ನಾಂ, ಜುಲೈ 11 : ದಕ್ಷಿಣ ವಿಯೆಟ್ನಾಂನ ಫೂ ಕ್ವೋಕ್ ದ್ವೀಪದ ಬಳಿ 32 ಭಾರತೀಯ ಪ್ರವಾಸಿಗರು ಮತ್ತು 4 ಜನ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಸ್ಪೀಡ್‌ಬೋಟ್ ಮಗುಚಿ ಬಿದ್ದ ಪರಿಣಾಮ 15 ಮಂದಿ ಭಾರತೀಯ ಪ್ರವಾಸಿಗರು ಸಾವನ್ನಪ್ಪಿದ್ದಾರೆ.
ಬೋಟ್‌ನಲ್ಲಿ ಒಟ್ಟು 32 ಮಂದಿ ಭಾರತೀಯ ಪ್ರವಾಸಿಗರಿದ್ದು ಅವರಲ್ಲಿ 15 ಪ್ರವಾಸಿಗರು ಸಾವನ್ನಪ್ಪಿದ್ದಾರೆ ಮತ್ತು 21 ಜನರನ್ನು ರಕ್ಷಿಸಲಾಗಿದೆ. ರಕ್ಷಣಾ ಕಾರ್ಯಾಚರಣೆಯಲ್ಲಿ ಹತ್ತಿರದ ದೋಣಿಗಳು, ಗಡಿ ಕಾವಲುಪಡೆ, ನೌಕಾಪಡೆ ಮತ್ತು ಕರಾವಳಿ ಕಾವಲುಪಡೆಗಳು ಭಾಗಿಯಾಗಿದ್ದವು, ಅಪಘಾತದ ಕಾರಣದ ಬಗ್ಗೆ ತನಿಖೆ ನಡೆಯುತ್ತಿದೆ.
ಶನಿವಾರ ಮಧ್ಯಾಹ್ನ ಸುಮಾರು 1 ಗಂಟೆಗೆ ಈ ದುರಂತ ಸಂಭವಿಸಿದೆ. ಪ್ರವಾಸಿಗರನ್ನು ಹಾನ್ ಮೇ ರುತ್‌ನಿಂದ ಅನ್ ಥೋಯ್ ಬಂದರಿಗೆ ಕರೆದೊಯ್ಯುತ್ತಿದ್ದಾಗ ಹಾನ್ ಮೇ ರುತ್ ನ್ಗೋಯ್‌ನಿಂದ ಸುಮಾರು 400 ಮೀಟರ್ ದೂರದಲ್ಲಿ ಬೋಟ್ ಪಲ್ಟಿಯಾಗಿದೆ. ಹತ್ತಿರದಲ್ಲೇ ಇದ್ದ ಇತರ ಪ್ರವಾಸಿಗರು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ. ಈ ಬೋಟ್ ಅನ್ನು ‘ಓಷಿಯನ್ ಪರ್ಲ್ ಐಲ್ಯಾಂಡ್ ಕಂಪನಿ’ ನಿರ್ವಹಿಸುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೋಟ್ ತಲೆಕೆಳಗಾಗಿ ಮುಳುಗಿದ ಕಾರಣದಿಂದಾಗಿ ಬಹುತೇಕ ಪ್ರವಾಸಿಗರು ಅದರ ಒಳಗಡೆಯೇ ಸಿಲುಕಿಕೊಂಡಿದ್ದರು.“ಭಾರೀ ಗಾಳಿಯಿಂದ ದೊಡ್ಡ ಅಲೆಗಳು ಏಳುತ್ತಿದ್ದುದರಿಂದಾಗಿ ಬೋಟ್​​ನ ಒಳಗಿನಿಂದ ಕೇವಲ ಕೆಲವೇ ಜನರನ್ನು ಮಾತ್ರ ಪ್ರಜ್ಞಾವಸ್ಥೆಯಲ್ಲಿದ್ದಾಗ ಹೊರಗೆ ಕರೆತರಲು ಸಾಧ್ಯವಾಯಿತು” ಎಂದು ಸ್ಥಳೀಯ ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
ಘಟನೆ ನಡೆದ ತಕ್ಷಣವೇ ಸ್ಥಳೀಯ ಅಧಿಕಾರಿಗಳು ಭಾರಿ ಪ್ರಮಾಣದ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿದ್ದು, ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ವಿಯೆಟ್ನಾಂನಲ್ಲಿರುವ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ. ಈ ಕುರಿತು ಮೈಕ್ರೋ-ಬ್ಲಾಗ್ಲಿಂಗ್ ತಾಣ ‘ಎಕ್ಸ್’ (X)ನಲ್ಲಿ ಪೋಸ್ಟ್ ಮಾಡಿರುವ ಭಾರತೀಯ ರಾಯಭಾರ ಕಚೇರಿ ಈ ಘಟನೆಯ ನಿಖರವಾದ ವಿವರಗಳನ್ನು ಕಲೆಹಾಕಲಾಗುತ್ತಿದೆ ಎಂದು ಹೇಳಿದೆ. ಅಲ್ಲದೆ ತಕ್ಷಣದ ನೆರವಿಗಾಗಿ ನಿಯಂತ್ರಣ ಕೊಠಡಿಯನ್ನು (Control Room) ಸ್ಥಾಪಿಸಲಾಗಿದ್ದು, +84 91 308 9165 ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದೆ.
ಈ ದುರಂತದಿಂದ ತೊಂದರೆಗೊಳಗಾದ ಕುಟುಂಬಗಳಿಗೆ ಮಾಹಿತಿ ಮತ್ತು ಸಹಾಯವನ್ನು ಒದಗಿಸಲು, ಹೋ ಚಿ ಮಿನ್ ಸಿಟಿಯಲ್ಲಿರುವ ಭಾರತದ ಕಾನ್ಸುಲೇಟ್ ಜನರಲ್ ಕಚೇರಿಯಲ್ಲಿ ನಿಯಂತ್ರಣ ಕೊಠಡಿಯನ್ನು ಆರಂಭಿಸಲಾಗಿದೆ. ಸಾರ್ವಜನಿಕರು ಈ +84 36 281 7930, +84 91 552 37 14 ಮತ್ತು +84 33 452 0414 ಸಂಖ್ಯೆಗಳನ್ನು ಸಂಪರ್ಕಿಸಬಹುದು. ಯಾವುದೇ ರೀತಿಯ ಸಹಾಯ ಮತ್ತು ಪ್ರಶ್ನೆಗಳಿಗೆ ನಾವು ಸದಾ ಸಿದ್ಧರಾಗಿದ್ದೇವೆ ಎಂದು ರಾಯಭಾರ ಕಚೇರಿ ತಿಳಿಸಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!