ಮಂಗಳೂರು, ನ.16: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಆಹಾರ ಸುರಕ್ಷತೆ ಮತ್ತು ಗುಣಮಟ್ಟವನ್ನು ಖಚಿತಪಡಿಸಿಕೊಳ್ಳುವ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ದಾಳಿಗಳನ್ನು ಮುಂದುವರೆಸಿದ್ದಾರೆ. ಮಂಗಳುರು ಹೊರವಲಯದ ಸುರತ್ಕಲ್ ಹಾಗೂ ಬೈಕಂಪಾಡಿ ವ್ಯಾಪ್ತಿಯ ಪ್ರಮುಖ ಹೋಟೆಲ್, ರಿಟೇಲ್ ಮಳಿಗೆಗಳು ಮತ್ತು ಆಹಾರ ತಯಾರಿಕಾ ಘಟಕಗಳ ಮೇಲೆ ಇಂದು ಆಹಾರ ಸುರಕ್ಷತಾ ಮತ್ತು ಗುಣಮಟ್ಟ ಇಲಾಖೆಯ ಅಧಿಕಾರಿಗಳು ಅನಿರೀಕ್ಷಿತ ದಾಳಿ ನಡೆಸಿದ್ದಾರೆ.
ಆರೋಗ್ಯ ಸಚಿವರ ಸೂಚನೆಯ ಮೇರೆಗೆ, ದಕ್ಷಿಣ ಕನ್ನಡ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದಲ್ಲಿ ಐದು ವಿಶೇಷ ತಂಡಗಳನ್ನು ರಚಿಸಿ ಈ ಕಾರ್ಯಾಚರಣೆ ಕೈಗೊಳ್ಳಲಾಗಿದೆ.
ಸುರತ್ಕಲ್‌ನಲ್ಲಿರುವ ಸೂರಜ್ ಇಂಟರ್‌ನ್ಯಾಷನಲ್ ಹೋಟೆಲ್, ಮೋರ್ (More) ರಿಟೇಲ್ ಮಳಿಗೆ, ಬ್ಲಿಂಕ್‌ಇಟ್ (Blinkit) ಆನ್‌ಲೈನ್ ಪ್ಲಾಟ್‌ಫಾರ್ಮ್ ಗೋದಾಮು, ಮೆಕ್‌ಡೊನಾಲ್ಡ್ಸ್ (McDonald's) ರೆಸ್ಟೋರೆಂಟ್, ಎನ್‌ಐಟಿಕೆ (NITK) ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಹಾಸ್ಟೆಲ್‌ಗಳಿಗೆ ಆಹಾರ ಸರಬರಾಜು ಮಾಡುವ ಅಡುಗೆಮನೆಗಳು (ಕಿಚನ್), ಮತ್ತು ಬೈಕಂಪಾಡಿ ಕೈಗಾರಿಕಾ ಪ್ರದೇಶದ ಆಹಾರ ತಯಾರಿಕಾ ಘಟಕಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಲಾಯಿತು.
ಸ್ನ್ಯಾಕ್ಸ್ ತಯಾರಿಕಾ ಘಟಕಕ್ಕೆ ಬೀಗ:
ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ 'ಫಾರ್ಚೂನ್ ಇಂಡಸ್ಟ್ರೀಸ್' (Fortune Industries) ಎಂಬ ಚೀಸ್ ಬಾಲ್ ಸ್ನ್ಯಾಕ್ಸ್ ತಯಾರಿಕಾ ಘಟಕದ ಮೇಲೆ ದಾಳಿ ನಡೆಸಿದಾಗ, ಅಲ್ಲಿ ತೀವ್ರ ಅನೈರ್ಮಲ್ಯ ಕಂಡುಬಂದಿದೆ. ಆಹಾರ ತಯಾರಿಸುವ ಜಾಗದಲ್ಲೇ ಹೆಗ್ಗಣಗಳು ಓಡಾಡುತ್ತಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ತಕ್ಷಣವೇ ಘಟಕವನ್ನು ಜಪ್ತಿ (ಸೀಜ್) ಮಾಡಿ ಸೀಲ್ ಮಾಡಲಾಯಿತು.
ಇದನ್ನೂ ಓದಿ..


