BREAKING
[ಹೋಮ್] ಕರ್ನಾಟಕ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru ಮಂಗಳೂರು: ಬೈಕಂಪಾಡಿಯ ‘ಬೋಲಾಸ್ ಆಗ್ರೋ’ ಘಟಕದ ಮೇಲೆ ದಾಳಿ; ಬರೋಬ್ಬರಿ 1,240 ಕೆ.ಜಿ. ಅಡುಗೆ ಎಣ್ಣೆ ಜಪ್ತಿ.!

ಮಂಗಳೂರು, ನ.18 : ಗ್ರಾಹಕರನ್ನು ದಾರಿತಪ್ಪಿಸುವ ರೀತಿಯಲ್ಲಿ ಮಿಸ್‌ಬ್ರ್ಯಾಂಡಿಂಗ್ (Misbranding) ಹಾಗೂ ಲೇಬಲಿಂಗ್ ನಿಯಮಗಳನ್ನು ಉಲ್ಲಂಘಿಸುತ್ತಿದ್ದ ಹಿನ್ನೆಲೆಯಲ್ಲಿ, ದಕ್ಷಿಣ ಕನ್ನಡ ಜಿಲ್ಲೆಯ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ‘ಬೋಲಾಸ್ ಆಗ್ರೋ ಪ್ರೈವೇಟ್ ಲಿಮಿಟೆಡ್’ (Bolas Agro Private Limited) ಆಹಾರೋತ್ಪನ್ನ ಘಟಕದ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆಯಲ್ಲಿ ಬರೋಬ್ಬರಿ 1,240 ಕೆ.ಜಿ. ಅಡುಗೆ ಎಣ್ಣೆಯನ್ನು ಆರೋಗ್ಯ ಇಲಾಖೆ ವಶಪಡಿಸಿಕೊಂಡಿದೆ.

ಚಳ್ಳಕೆರೆ ಕಚ್ಚಾ ಎಣ್ಣೆಗೆ ‘ಕೋಲ್ಡ್ ಪ್ರೆಸ್ಡ್’ ಲೇಬಲ್!

ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ (FSSAI) ಸಿಬ್ಬಂದಿ ಘಟಕಕ್ಕೆ ದಿಢೀರ್ ದಾಳಿ ನಡೆಸಿದಾಗ ಬ್ರ್ಯಾಂಡಿಂಗ್ ಪ್ರಕ್ರಿಯೆಯಲ್ಲಿ ಗಂಭೀರ ಲೋಪದೋಷಗಳು ಕಂಡುಬಂದಿವೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆಯಿಂದ ಕಚ್ಚಾ ಕಡಲೆಕಾಯಿ ಎಣ್ಣೆಯನ್ನು (Raw Groundnut Oil) ತರಿಸಲಾಗುತ್ತಿತ್ತು.ಬಳಿಕ ಘಟಕದಲ್ಲಿ ಅದನ್ನು ‘ಕೋಲ್ಡ್ ಪ್ರೆಸ್ಡ್ ಕಡಲೆಕಾಯಿ ಎಣ್ಣೆ’ (Cold Pressed Groundnut Oil) ಎಂದು ರೀಪ್ಯಾಕ್ ಮಾಡಿ ಮಾರುಕಟ್ಟೆಗೆ ಬಿಡಲಾಗುತ್ತಿತ್ತು ಎಂಬುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಇದು ಗ್ರಾಹಕರನ್ನು ನೇರವಾಗಿ ದಾರಿತಪ್ಪಿಸುವ ಕೃತ್ಯವಾಗಿರುವುದರಿಂದ ಅಧಿಕಾರಿಗಳು ಈ ಜಪ್ತಿ ಕ್ರಮ ಕೈಗೊಂಡಿದ್ದಾರೆ.

ಕಡಲೆಕಾಯಿ ಎಣ್ಣೆ (ಬಾಕ್ಸ್): ಪ್ರತಿ ಬಾಕ್ಸ್‌ಗೆ 10 ಕೆ.ಜಿ.ಯಂತೆ ಒಟ್ಟು 11 ಬಾಕ್ಸ್‌ಗಳು.

ಕಡಲೆಕಾಯಿ ಎಣ್ಣೆ (ಕ್ಯಾನ್): ಪ್ರತಿ ಕ್ಯಾನ್‌ಗೆ 35 ಲೀಟರ್‌ನಂತೆ ಒಟ್ಟು 30 ಕ್ಯಾನ್‌ಗಳು.

ತೆಂಗಿನ ಎಣ್ಣೆ (ಬಾಕ್ಸ್): ಪ್ರತಿ ಬಾಕ್ಸ್‌ಗೆ 20 ಕೆ.ಜಿ.ಯಂತೆ ಒಟ್ಟು 4 ಬಾಕ್ಸ್‌ಗಳು.

ಮಿಸ್‌ಬ್ರ್ಯಾಂಡಿಂಗ್ ಹಾಗೂ ಲೇಬಲಿಂಗ್ ನಿಯಮಗಳ ಉಲ್ಲಂಘನೆಯ ವಿರುದ್ಧ ಆರೋಗ್ಯ ಇಲಾಖೆ ಕೈಗೊಂಡಿರುವ ಈ ಕಠಿಣ ಕ್ರಮವು, ಗ್ರಾಹಕರ ಹಿತಾಸಕ್ತಿ ಮತ್ತು ಆಹಾರ ಸುರಕ್ಷತೆಯ ದೃಷ್ಟಿಯಿಂದ ಮಹತ್ವ ಪಡೆದುಕೊಂಡಿದೆ.

 ಇದನ್ನೂ ಓದಿ..

ಗ್ರೇಟರ್ ನೋಯ್ಡಾ: ಪೊಲೀಸ್ ಕ್ವಾರ್ಟರ್ಸ್‌ನ ಶೌಚಾಲಯದಲ್ಲಿ ಶವವಾದ ಮಹಿಳಾ ಸಬ್-ಇನ್ಸ್‌ಪೆಕ್ಟರ್..!

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!