BREAKING
[ಹೋಮ್] ಕರ್ನಾಟಕ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangaluru|ದಾಂಡಿಯಾ ನೈಟ್ ಹೆಸರಿನಲ್ಲಿ ಅಸಭ್ಯ ನೃತ್ಯ-ಹಾಡು-ಬರ್ಕೆ ಠಾಣೆಯಲ್ಲಿ ದೂರು ದಾಖಲು, ಶಾಲೇಟ್ ಪಿಂಟೋ ವಿರುದ್ಧ ಎಫ್‌ಐಆರ್ ದಾಖಲಿಸಲು ದುರ್ಗಾವಾಹಿನಿ ಆಗ್ರಹ

ಮಂಗಳೂರು, ಅ.23 : ನಗರದ ಸುಲ್ತಾನ್ ಬತ್ತೇರಿಯ 'ಎಡ್ಜ್ ವಾಟರ್' (Edge Water) ನಲ್ಲಿ ಅಕ್ಟೋಬರ್ 18 ರಂದು ನಡೆದ ನವರಾತ್ರಿ ಆಚರಣೆಯ ದಾಂಡಿಯಾ ಕಾರ್ಯಕ್ರಮದಲ್ಲಿ ಅಸಭ್ಯ ನೃತ್ಯ ಹಾಗೂ ಅಶ್ಲೀಲ ಗಾಯನ ನಡೆಸುವ ಮೂಲಕ ಹಿಂದೂ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತರಲಾಗಿದೆ ಎಂದು ಆರೋಪಿಸಲಾಗಿದೆ.  ಈ ಹಿನ್ನೆಲೆಯಲ್ಲಿ ದುರ್ಗಾವಾಹಿನಿ ವತಿಯಿಂದ ಬರ್ಕೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. 

ನವರಾತ್ರಿ ಉತ್ಸವದ ನೆಪದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಅಸಭ್ಯ ನೃತ್ಯ ಹಾಗೂ ಅಶ್ಲೀಲ ಗಾಯನ ಕಾರ್ಯಕ್ರಮ ಆಯೋಜಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ 'ದುರ್ಗಾವಾಹಿನಿ ಮಂಗಳೂರು' ಸಂಘಟನೆಯು ಪೊಲೀಸ್ ಠಾಣೆಗೆ ದೂರು ಸಲ್ಲಿಸಿದೆ.   ದೂರಿನ ಪ್ರಕಾರ, ಅಕ್ಟೋಬರ್ 18ರ ಭಾನುವಾರದಂದು ಸುಲ್ತಾನ್ ಬತ್ತೇರಿಯ 'ಎಡ್ಜ್ ವಾಟರ್' ಆವರಣದಲ್ಲಿ ಶಾಲೇಟ್ ಪಿಂಟೋ (Shalet Pinto) ಅವರ ನೇತೃತ್ವದಲ್ಲಿ "Shalet Pinto Presents Dandiya Night 2.0 - On Occasion of Navratri" ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.   ನವರಾತ್ರಿಯ ದಾಂಡಿಯಾ ನೃತ್ಯವು ದುರ್ಗೆಯ ಆರಾಧನೆಯ ಪವಿತ್ರ ಭಾಗವಾಗಿದ್ದು, ಸಾಂಪ್ರದಾಯಿಕ ಉಡುಪುಗಳೊಂದಿಗೆ ಶ್ರದ್ಧಾ-ಭಕ್ತಿಯಿಂದ ಆಚರಿಸಲ್ಪಡುತ್ತದೆ. ಆದರೆ ಈ ಕಾರ್ಯಕ್ರಮದಲ್ಲಿ ಅಸಭ್ಯ ಉಡುಪುಗಳನ್ನು ಧರಿಸಿ, ಪಾಶ್ಚಿಮಾತ್ಯ ಅಶ್ಲೀಲ ಹಾಡುಗಳಿಗೆ ನೃತ್ಯ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಇದಕ್ಕೆ ಸಂಬಂಧಿಸಿದ ವೀಡಿಯೊಗಳು ಪ್ರಸ್ತುತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.   ಪವಿತ್ರ ನವರಾತ್ರಿ ಹಬ್ಬದ ಹೆಸರನ್ನು ದುರ್ಬಳಕೆ ಮಾಡಿಕೊಂಡು ಹಿಂದೂ ಧರ್ಮೀಯರ ಧಾರ್ಮಿಕ ಭಾವನೆಗಳಿಗೆ ತೀವ್ರ ಧಕ್ಕೆ ತಂದಿರುವ ಆಯೋಜಕಿ ಶಾಲೇಟ್ ಪಿಂಟೋ ಹಾಗೂ ಇತರ ಸಂಬಂಧಪಟ್ಟವರ ವಿರುದ್ಧ ತಕ್ಷಣವೇ ಎಫ್.ಐ.ಆರ್ (FIR) ದಾಖಲಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದುರ್ಗಾವಾಹಿನಿ ಸಂಘಟನೆಯು ಆಗ್ರಹಿಸಿದೆ.   

 ಈ ಕುರಿತು ಪ್ರತಿಕ್ರಿಯಿಸಿರುವ ವಿಶ್ವಹಿಂದೂ ಪರಿಷತ್ ಮುಖಂಡ ಶರಣ್ ಪಂಪ್‌ವೆಲ್, "ಹಿಂದೂಗಳ ಶ್ರದ್ಧಾ-ಭಕ್ತಿಯ ನವರಾತ್ರಿ ಹಬ್ಬದ ಹೆಸರಿನಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಈ ಕಾರ್ಯಕ್ರಮದ ಆಯೋಜಕರ ವಿರುದ್ಧ ಪೊಲೀಸ್ ಇಲಾಖೆಯು ತಕ್ಷಣವೇ ಎಫ್‌ಐಆರ್ (FIR) ದಾಖಲಿಸಬೇಕು ಹಾಗೂ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು" ಎಂದು ಬಲವಾಗಿ ಆಗ್ರಹಿಸಿದ್ದಾರೆ.




📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!