BREAKING
[ಹೋಮ್] ಕರ್ನಾಟಕ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ಕರ್ನಾಟಕ

Karnataka Police ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ: 32 ಐಪಿಎಸ್ ಅಧಿಕಾರಿಗಳ ವರ್ಗಾವಣೆ; ಬೆಂಗಳೂರಿನ ನೂತನ ಮುಖ್ಯ ಆಯುಕ್ತರಾಗಿ ಆರ್. ಹಿತೇಂದ್ರ, ಪಶ್ಚಿಮ ವಲಯ IGPಯಾಗಿ ಎನ್. ಶಶಿಕುಮಾರ್ ನೇಮಕ..!

ಬೆಂಗಳೂರು,ನ.18: ರಾಜ್ಯ ಸರ್ಕಾರವು ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆಯಲ್ಲಿ ಮಹತ್ವದ ಬದಲಾವಣೆ ತಂದಿದೆ. ಒಟ್ಟು 32 ಐಪಿಎಸ್ (IPS) ಅಧಿಕಾರಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಅಧಿಕೃತ ಆದೇಶ ಹೊರಡಿಸಿದೆ.


ಈ ಮಹತ್ವದ ಬದಲಾವಣೆಯಲ್ಲಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹಿರಿಯ ಐಪಿಎಸ್ ಅಧಿಕಾರಿ ಆರ್. ಹಿತೇಂದ್ರ ಅವರನ್ನು ಬೆಂಗಳೂರಿನ ನೂತನ ಮುಖ್ಯ ಪೊಲೀಸ್ ಆಯುಕ್ತರನ್ನಾಗಿ ನೇಮಕ ಮಾಡಲಾಗಿದೆ.


ಪ್ರಮುಖ ವರ್ಗಾವಣೆ ಹಾಗೂ ನೇಮಕಾತಿ ವಿವರ:

ಬೆಂಗಳೂರು ನಗರದ ನೂತನ ಮುಖ್ಯ ಪೊಲೀಸ್ ಆಯುಕ್ತರಾಗಿ ಆರ್. ಹಿತೇಂದ್ರ ಅವರಿಗೆ ಜವಾಬ್ದಾರಿ ವಹಿಸಲಾಗಿದೆ.

ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿದ್ದ ಸೀಮಂತ್ ಕುಮಾರ್ ಸಿಂಗ್ ಅವರನ್ನು ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಎಡಿಜಿಪಿಯಾಗಿ (ADGP) ವರ್ಗಾವಣೆ ಮಾಡಲಾಗಿದೆ.


ವಲಯವಾರು ಹೊಸ ಹುದ್ದೆಗಳು: ಬೆಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಆಡಳಿತಾತ್ಮಕ ಸುಧಾರಣೆಗಾಗಿ ಹೊಸದಾಗಿ ವಲಯವಾರು ಆಯುಕ್ತರು ಹಾಗೂ ಡಿಸಿಪಿ (DCP) ಹುದ್ದೆಗಳನ್ನು ಸೃಜಿಸಲಾಗಿದ್ದು, ಈ ಹುದ್ದೆಗಳಿಗೂ ಪ್ರಮುಖ ಅಧಿಕಾರಿಗಳನ್ನು ನಿಯೋಜಿಸಿ ಸರ್ಕಾರ ಆದೇಶಿಸಿದೆ.


ಬೆಂಗಳೂರಿಗೆ 6 ಹೊಸ ಪೊಲೀಸ್‌ ಆಯುಕ್ತರ ನೇಮಕ

ಆರ್. ಹಿತೇಂದ್ರ - ಮುಖ್ಯ ಪೊಲೀಸ್ ಆಯುಕ್ತರು

ಲಾಭೂ ರಾಮ್ -ಸೆಂಟ್ರಲ್

ಡಾ. ಪಿ.ಎಸ್. ಹರ್ಷ - ಪೂರ್ವ

ವಿಕಾಶ್ ಕುಮಾರ್ ವಿಕಾಶ್ - ಪಶ್ಚಿಮ

ಡಾ. ಎಂ.ಬಿ. ಬೋರಲಿಂಗಯ್ಯ - ಉತ್ತರ

ಹೇಮಂತ್ ಎಂ. ನಿಂಬಾಳ್ಕರ್ - ಸಂಚಾರ


ರಾಜ್ಯದ ಇತರ ಪ್ರಮುಖ ಬದಲಾವಣೆಗಳು:

  • ಬಿಜಯ್ ಕುಮಾರ್ ಸಿಂಗ್: ಎಡಿಜಿಪಿ, ಕಾನೂನು ಮತ್ತು ಸುವ್ಯವಸ್ಥೆ

  • ಎಸ್. ಮುರುಗನ್: ಎಡಿಜಿಪಿ, ಲೋಕಾಯುಕ್ತ

  • ಮನೀಶ್ ಖರ್ಬೀಕರ್: ಎಡಿಜಿಪಿ, ಸಂವಹನ, ಲಾಜಿಸ್ಟಿಕ್ಸ್ ಮತ್ತು ಆಧುನೀಕರಣ

  • ಎನ್. ಶಶಿಕುಮಾರ್: ಐಜಿಪಿ, ಪಶ್ಚಿಮ ವಲಯ (ಮಂಗಳೂರು)

  • ಅನುಪಮ್ ಅಗರ್ವಾಲ್: ಐಜಿಪಿ, ಕೆಎಸ್‌ಆರ್‌ಪಿ (KSRP)

  • ಕುಲದೀಪ್ ಕುಮಾರ್ ಆರ್. ಜೈನ್: ಪೊಲೀಸ್ ಆಯುಕ್ತರು, ಕಲಬುರಗಿ ನಗರ

  • ಎಂ. ಪುಟ್ಟಮಾದಯ್ಯ: ಡಿಐಜಿಪಿ, ದಕ್ಷಿಣ ವಲಯ (ಮೈಸೂರು)

  • ಡಾ. ಶರಣಪ್ಪ ಎಸ್.ಡಿ: ಡಿಐಜಿಪಿ, ರೈಲ್ವೇಸ್

  • ಡಾ. ಎಂ. ಅಶ್ವಿನಿ: ಡಿಐಜಿಪಿ, ನೇಮಕಾತಿ ವಿಭಾಗ

  • ಜೆ.ಕೆ. ರಶ್ಮಿ: ಡಿಐಜಿಪಿ, ಜಾಗೃತ ದಳ (ಜಲಸಂಪನ್ಮೂಲ ಇಲಾಖೆ)

ಬೆಂಗಳೂರು ನಗರದ ನೂತನ ಡಿಸಿಪಿಗಳು (DCPs):

  • ಆಡಳಿತ: ರಂಜಿತ್ ಕುಮಾರ್ ಬಂಡಾರು

  • ಸೆಂಟ್ರಲ್: ಚನ್ನಬಸವಣ್ಣ ಲಂಗೋಟಿ (ಇಂದಿರಾನಗರ), ಲಕ್ಷ್ಮೀ ಗಣೇಶ್ ಕೆ (ಗಾಂಧಿನಗರ), ಲಕ್ಷ್ಮಣ್ ನಿಂಬರಗಿ (ಸಿಎಆರ್ ಕೇಂದ್ರ ಸ್ಥಾನ), ಲೋಕೇಶ್ ಬಿ. ಜಗಲಾಸರ್ (ಸಂಚಾರ)

  • ಪೂರ್ವ: ಡಾ. ಗೀತಾ ಎಂ.ಎಸ್, ಶ್ರೀಹರಿ ಬಾಬು ಬಿ.ಎಲ್ (ವೈಟ್‌ಫೀಲ್ಡ್), ಡಾ. ಅನೂಪ್ ಎ. ಶೆಟ್ಟಿ (ಸಂಚಾರ)

  • ಪಶ್ಚಿಮ: ಯತೀಶ್ ಎನ್ (ಕೆಂಗೇರಿ), ಅಶೋಕ್ ಕೆ.ವಿ (ಪೀಣ್ಯ), ಪಿ.ವಿ. ಸ್ನೇಹಾ (ಸಂಚಾರ)

  • ಉತ್ತರ: ಅಮಟೆ ವಿಕ್ರಮ್, ನಾಗೇಶ್ ಡಿ.ಎಲ್ (ಯಶವಂತಪುರ)

  • ಆಂತರಿಕ ಭದ್ರತೆ (ಎಸ್ಪಿ): ಸೈದುಲು ಅಡಾವತ್ 

  • ಶ್ರೀಹರಿ ಬಾಬು ಬಿ.ಎಲ್: ಡಿಸಿಪಿ, ವೈಟ್‌ಫೀಲ್ಡ್ (ಪೂರ್ವ ಬೆಂಗಳೂರು ನಗರ)

  • ಡಾ. ಗೀತಾ ಎಂ.ಎಸ್: ಡಿಸಿಪಿ, ಪೂರ್ವ ಬೆಂಗಳೂರು ನಗರ (ಹಿಂದೆ: ಎಸ್ಪಿ, ಬಿಎಂಟಿಎಫ್)

  • ರಂಜಿತ್ ಕುಮಾರ್ ಬಂಡಾರು: ಡಿಸಿಪಿ (ಆಡಳಿತ), ಬೆಂಗಳೂರು ನಗರ

  • ಅಶೋಕ್ ಕೆ.ವಿ: ಡಿಸಿಪಿ, ಪೀಣ್ಯ (ಪಶ್ಚಿಮ ಬೆಂಗಳೂರು ನಗರ) (ಹಿಂದೆ: ಎಸ್ಪಿ, ತುಮಕೂರು)

  • ಅಮಟೆ ವಿಕ್ರಮ್: ಡಿಸಿಪಿ, ಉತ್ತರ ಬೆಂಗಳೂರು ನಗರ (ಹಿಂದೆ: ಡಿಸಿಪಿ, ಪೂರ್ವ ವಿಭಾಗ)

  • ಲಕ್ಷ್ಮೀ ಗಣೇಶ್ ಕೆ: ಡಿಸಿಪಿ, ಗಾಂಧಿನಗರ (ಸೆಂಟ್ರಲ್ ಬೆಂಗಳೂರು ನಗರ)

  • ಪಿ.ವಿ. ಸ್ನೇಹಾ: ಡಿಸಿಪಿ (ಸಂಚಾರ), ಪಶ್ಚಿಮ ಬೆಂಗಳೂರು ನಗರ (ಹಿಂದೆ: ಎಸ್ಪಿ, ಲೋಕಾಯುಕ್ತ)

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!