BREAKING
[ಹೋಮ್] ಕರ್ನಾಟಕ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Bantwala chain Snatching ವಿಟ್ಲ ಬಳಿ ದಾರಿ ಕೇಳುವ ನೆಪದಲ್ಲಿ ಮಹಿಳೆಯ ಸರ ಕಳವು; ಸಿಸಿಟಿವಿಯಲ್ಲಿ ಸೆರೆಯಾದ ದೃಶ್ಯ, ಉಪ್ಪಿನಂಗಡಿಯಲ್ಲೂ ಕಳ್ಳತನಕ್ಕೆ ವಿಫಲ ಯತ್ನ


ಬಂಟ್ವಾಳ, ನ. 13: ಬಂಟ್ವಾಳ ತಾಲೂಕಿನ ಸೂರಿಕುಮೇರು ಕಾಯರಡ್ಕ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೃದ್ಧ ಮಹಿಳೆಯೊಬ್ಬರ ಕತ್ತಿನಲ್ಲಿದ್ದ ಸರವನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಹಾಡಹಗಲೇ ಕಸಿದು ಪರಾರಿಯಾದ ಘಟನೆ ನವೆಂಬರ್ 12ರಂದು ನಡೆದಿದೆ.


ಬರಿಮಾರು ರಸ್ತೆಯ ಕಡೆಯಿಂದ ಬೈಕ್‌ನಲ್ಲಿ ಬಂದಿದ್ದ ಇಬ್ಬರು ಯುವಕರು ಮುಖಕ್ಕೆ ಮಾಸ್ಕ್ ಧರಿಸಿದ್ದರು. ದಾರಿ ಕೇಳುವ ನೆಪದಲ್ಲಿ ವೃದ್ಧ ಮಹಿಳೆಯ ಬಳಿ ಬಂದ ದುಷ್ಕರ್ಮಿಗಳು, ಕ್ಷಣಾರ್ಧದಲ್ಲಿ ಅವರ ಕುತ್ತಿಗೆಯಲ್ಲಿದ್ದ ಸರವನ್ನು ಎಳೆದುಕೊಂಡು ಬಂದ ದಾರಿಯಲ್ಲೇ ಪರಾರಿಯಾಗಿದ್ದಾರೆ.


ಚಿನ್ನವೆಂದು ನಕಲಿ ಸರ ಕಸಿದ ಕಳ್ಳರು:

ವಿಶೇಷವೆಂದರೆ, ದುಷ್ಕರ್ಮಿಗಳು ಮಹಿಳೆಯ ಕುತ್ತಿಗೆಯಿಂದ ಕಸಿದುಕೊಂಡ ಸರವು ಅಸಲಿ ಚಿನ್ನದ್ದಲ್ಲ ಎನ್ನಲಾಗಿದೆ. ಚಿನ್ನದ ಸರವೆಂದು ಭಾವಿಸಿ ಹಾಡಹಗಲೇ ಕೃತ್ಯ ಎಸಗಿದ ಕಳ್ಳರೇ ಕೊನೆಗೆ ಮೋಸ ಹೋದಂತಾಗಿದೆ.


ಸಿಸಿಟಿವಿಯಲ್ಲಿ ದೃಶ್ಯ ಸೆರೆ:

ದುಷ್ಕರ್ಮಿಗಳು ಪರಾರಿಯಾದ ಬರಿಮಾರು ರಸ್ತೆಯು ಬಿ.ಸಿ.ರೋಡ್, ಮಂಗಳೂರು ಹಾಗೂ ಉಪ್ಪಿನಂಗಡಿ ಭಾಗಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ಮಾರ್ಗವಾಗಿದೆ. ಆರೋಪಿಗಳು ಯಾವ ದಿಕ್ಕಿನಲ್ಲಿ ತೆರಳಿದ್ದಾರೆ ಎಂಬ ಬಗ್ಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ. ಘಟನೆ ನಡೆದ ಸ್ಥಳದ ಸಮೀಪದ ನೂತನ ಕಟ್ಟಡವೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳರ ಕೈಚಳಕ ಸೆರೆಯಾಗಿದ್ದು, ಹಾಡಹಗಲೇ ನಡೆದ ಈ ಕೃತ್ಯದಿಂದ ಸ್ಥಳೀಯರಲ್ಲಿ ಆತಂಕ ಮನೆಮಾಡಿದೆ.

ಕಾರ್ಕಳ ತಾಯಿಯನ್ನು ಡಯಾಲಿಸಿಸ್‌ಗೆ ಆಸ್ಪತ್ರೆಗೆ ಬಿಟ್ಟು ಮನೆಗೆ ಮರಳಿದ ಯುವಕ ನೇಣಿಗೆ ಶರಣು..!

ಉಪ್ಪಿನಂಗಡಿಯಲ್ಲೂ ಸರಗಳ್ಳತನಕ್ಕೆ ವಿಫಲ ಯತ್ನ:

ಇದೇ ದಿನ (ನವೆಂಬರ್ 12) ಉಪ್ಪಿನಂಗಡಿಯಲ್ಲಿಯೂ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು, ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಚಿನ್ನದ ಸರವನ್ನು ಕಸಿದು ಪರಾರಿಯಾಗಲು ಯತ್ನಿಸಿದ್ದಾರೆ. ಆದರೆ, ಕಳ್ಳರು ಸರ ಎಳೆಯುವ ಭರದಲ್ಲಿ ಎರಡೂ ಕಡೆ ಚಿನ್ನದ ಆಭರಣಗಳು ತುಂಡಾಗಿ ಕೆಳಗೆ ಬಿದ್ದಿದ್ದರಿಂದ ಮಹಿಳೆಯರ ಚಿನ್ನದ ಸರಗಳು ಕಳ್ಳರ ಪಾಲಾಗದೆ ಉಳಿದುಕೊಂಡಿವೆ. ಎರಡೂ ಪ್ರಕರಣಗಳಲ್ಲಿ ಒಂದೇ ತಂಡ ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ.



📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!