BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ಉಡುಪಿ

Udupi ಬ್ರಹ್ಮಾವರದಲ್ಲಿ ಅಪ್ರಾಪ್ತನ ಅಪಹರಣ ಪ್ರಕರಣ, ಬಾಲಪರಾಧಿ ಸೇರಿ ಮೂವರು ಅರೆಸ್ಟ್

ಉಡುಪಿ, ಜುಲೈ 03 : ಉಡುಪಿ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕನ ಅಪಹರಣಲ್ಲಿ ಓರ್ವ ಬಾಲಪರಾಧಿ ಸೇರಿ ಮೂವರು ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ.



 ಬಾಲಕನನ್ನು ಉಡುಪಿ ಬ್ರಹ್ಮಾವರ ಬಸ್ ನಿಲ್ದಾಣದಿಂದ ಅಪಹರಿಸಿದ ತಂಡ ಕೇರಳಕ್ಕೆ ಕೊಂಡೊಯ್ದು ಬಲವಂತವಾಗಿ ಕೆಲಸಕ್ಕೆ ಸೇರಿಸಿ ದೌರ್ಜನ್ಯ ಎಸಗಿದ್ದರು. ವಾರಂಬಳ್ಳಿ ಗ್ರಾಮ ಸಾಲಿಕೇರಿಯ ವಿಖ್ಯಾತ್ ಆಚಾರ್ಯ (19) ಮತ್ತು ಮಟಪಾಡಿ ಗ್ರಾಮದ ನಿವಾಸಿ ಸುಚಿತ್ ನಾಯಕ್ (20) ಬಂಧಿತ ಆರೋಪಿಗಳಾಗಿದ್ದಾರೆ.  

ಘಟನೆಯ ವಿವರ :

ಜೂನ್ 1ರಂದು ಈ ಘಟನೆ ನಡೆದಿದ್ದು ಬೆಳಗ್ಗೆ ಸುಮಾರು  8:30ರ ಹೊತ್ತಿಗೆ ಬ್ರಹ್ಮಾವರ ಬಸ್ ನಿಲ್ದಾಣದ ಬಳಿಯಿಂದ ಅಪ್ರಾಪ್ತ ಬಾಲಕನನ್ನು ಬಲವಂತವಾಗಿ ಅಪಹರಿಸಿಕೊಂಡು ಕೇರಳದ ತಲಪಾಡಿ ಕುಂಜತ್ತೂರು ಪದವು ಎಂಬಲ್ಲಿಗೆ  ಕರೆದೊಯ್ದಿದ್ದ ಆರೋಪಿಗಳು ಬಲಾತ್ಕಾರವಾಗಿ ಫ್ಲೈವುಡ್ ಕಾರ್ಖಾನೆಗೆ ಕೆಲಸಕ್ಕೆ ಸೇರಿಸಿದ್ದರು. ಈ ಸಂದರ್ಭ ಬಾಲಕ ತನಗೆ ಮನೆಗೆ ಹೋಗಬೇಕೆಂದು ಹಠ ಹಿಡಿದಾಗ, ಆರೋಪಿಗಳಲ್ಲಿ ಒಬ್ಬನಾದ ಸುಚಿತ್  ರೂಮಿನಲ್ಲಿ ಬಾಲಕನನ್ನು ಕೂಡಿಹಾಕಿ ಗೆ ಹಲ್ಲೆ ನಡೆಸಿದ್ದ. ಮತ್ತೊಬ್ಬ ಆರೋಪಿ ವಿಖ್ಯಾತ್ ಚೂರಿ ತೋರಿಸಿ ಕೊಲೆ ಬೆದರಿಕೆ ಕೂಡ ಹಾಕಿದ್ದ ಎನ್ನಲಾಗಿದೆ.  ಈ ಕೃತ್ಯವನ್ನು ಇನ್ನೊಬ್ಬ ಮೊಬೈಲ್‌ನಲ್ಲಿ ವಿಡಿಯೋ ಮಾಡಿರುವುದಾಗಿ ಬಾಲಕನ ತಂದೆ ಬ್ರಹ್ಮಾವರ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. 

ಅಪಹರಿಸಲ್ಪಟ್ಟ ಅಪ್ರಾಪ್ತ ಬಾಲಕ ಬ್ರಹ್ಮಾವರದ ಮಟಪಾಡಿ ಗ್ರಾಮ ನಿವಾಸಿಯೊಬ್ಬರ ಪುತ್ರನಾಗಿದ್ದು, ಬ್ರಹ್ಮಾವರ ಸರಕಾರಿ ಹೈಸ್ಕೂಲ್‌ನಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿರುವುದಾಗಿ ಹೇಳಲಾಗಿದೆ. ಇದೀಗ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದು, ನ್ಯಾಯಾಲಯದ ಮುಂದೆ ಹಾಜರುಪಡಿಸಲಿದ್ದಾರೆ. ಪ್ರಕರಣದ ಮೂರನೇ ಆರೋಪಿ ಬಾಲಾಪರಾಧಿ ಯಾಗಿದ್ದು, ಆತನನ್ನು ಬಾಲ ನ್ಯಾಯ ಮಂಡಳಿಯ ಮುಂದೆ ಹಾಜರು ಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!