ಕೊಲಂಬೊ, ಜುಲೈ.02: ದೇಶಾದ್ಯಂತ ಜಾರಿಗೊಳಿಸಲಾಗಿದ್ದ ತುರ್ತು ಪರಿಸ್ಥಿತಿಗೆ ಶ್ರೀಲಂಕಾ ಸರ್ಕಾರ ಅಂತ್ಯ ಹಾಡಿದೆ.
ಎಂಟು ತಿಂಗಳ ಹಿಂದೆ ಭೀಕರ ಚಂಡಮಾರುತದಿಂದ ಸುಮಾರು 643 ಜನರ ಸಾವಿಗೀಡಾಗಿದ್ದರು. ಈ ಕಾರಣಕ್ಕೆ ಘೋಷಿಸಲಾಗಿದ್ದ ತುರ್ತು ಪರಿಸ್ಥಿತಿಯನ್ನು ಶ್ರೀಲಂಕಾ ಸರಕಾರ ಕೊನೆಗೊಳಿಸಿದೆ. ಈ ಬಗ್ಗೆ ಮಾಧ್ಯಮ ಸಚಿವ ನಲಿಂಡಾ ಜಯತಿಸ್ಸಾ ಮಾಹಿತಿ ನೀಡಿದ್ದಾರೆ. 2025ರ ನವೆಂಬರ್‍ನಲ್ಲಿ `ದಿತ್ವಾ' ಚಂಡಮಾರುತದಿಂದ ವ್ಯಾಪಕ ಸಾವು-ನೋವು, ಕಷ್ಟನಷ್ಟ ಉಂಟಾಗಿತ್ತು. ಇದಕ್ಕಾಗಿ ಅಧ್ಯಕ್ಷ ಅನುರ ಕುಮಾರ ಡಿಸ್ಸಾನಾಯಕೆ ಅವರು ತುರ್ತು ಪರಿಸ್ಥಿತಿಯನ್ನು ದೇಶದಾದ್ಯಂತ ಜಾರಿಗೆ ತಂದಿದ್ದರು. ಪರಿಹಾರ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸೈನಿಕರನ್ನು ನಿಯೋಜಿಸಲು ಅನುಮತಿಸುವ ಈ ಅಸಾಧಾರಣ ಅಧಿಕಾರಗಳನ್ನು ಪ್ರತಿ ತಿಂಗಳು ವಿಸ್ತರಿಸಲಾಗುತ್ತಿತ್ತು. ಇದೀಗ ಸರ್ಕಾರ ಈ ತುರ್ತು ಪರಿಸ್ಥಿತಿಯನ್ನು ಕೊನೆಗೊಳಿಸಿದೆ.
