BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದೇಶ

Mysuru ನೈರುತ್ಯ ರೈಲ್ವೆಯ ಮಹಾಪ್ರಬಂಧಕರಿಂದ ಕೇಂದ್ರ ಕಾರ್ಯಾಗಾರ,ಅಶೋಕಪುರಂ,ಮೈಸೂರು ರೈಲು ನಿಲ್ದಾಣ, ಗೂಡ್ಸ್ ಟರ್ಮಿನಲ್ ಪರಿಶೀಲನೆ

ಮೈಸೂರು, ಜುಲೈ 04 : ನೈರುತ್ಯ ರೈಲ್ವೆಯ ಮಹಾಪ್ರಬಂಧಕರಾದ  ಶ್ರೀ ಪಿ. ಅನಂತ್ ಅವರು, ಮೈಸೂರು ಕೇಂದ್ರ ಕಾರ್ಯಾಗಾರದ ಪರಿಶೀಲನೆ ನಡೆಸಿದರು.



ಈ ಸಂಧರ್ಭದಲ್ಲಿ ಪ್ರಧಾನ ಮೆಕ್ಯಾನಿಕಲ್ ಇಂಜಿನಿಯರ್  ನವೀದ್ ತಾಲಿಬ್, ಮೈಸೂರು ವಿಭಾಗದ ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ  ಶಮ್ಮಾಸ್ ಹಮೀದ್, ಮುಖ್ಯ ಕಾರ್ಯಾಗಾರ ವ್ಯವಸ್ಥಾಪಕ   ಸಂದೀಪ್ ಕುಮಾರ್ ವರ್ಮಾ ಹಾಗೂ ಉಪ ಮುಖ್ಯ ಕಾರ್ಯಾಗಾರ ವ್ಯವಸ್ಥಾಪಕ ಭೇಶ್ ದತ್ ಅವರೊಂದಿಗೆ ಮೈಸೂರು ಕೇಂದ್ರ ಕಾರ್ಯಾಗಾರವನ್ನು ಪರಿಶೀಲಿಸಿದರು.


ಈ ವೇಳೆ ಅವರು ವೀಲ್ ಶಾಪ್, ಬೋಗಿ ರಿಪೇರ್ ಶಾಪ್, ಕ್ಯಾರೇಜ್ ಬಾಡಿ ರಿಪೇರ್ ಮತ್ತು ಹೆವಿ ಕೊರೋಶನ್ ಶಾಪ್, ಏರ್ ಬ್ರೇಕ್ ಮತ್ತು ಎಸಿ ಶಾಪ್, ಪೇಂಟ್ ಮತ್ತು ಟ್ರಿಮ್ಮಿಂಗ್ ಶಾಪ್‌ಗಳನ್ನು ಪರಿಶೀಲಿಸಿದರು. ಕಾರ್ಯಾಗಾರದಲ್ಲಿ ನಡೆಯುತ್ತಿರುವ ನಿರ್ವಹಣೆ ಹಾಗೂ ಉತ್ಪಾದನಾ ಚಟುವಟಿಕೆಗಳನ್ನು ಪರಿಶೀಲಿಸಿ, ಗುಣಮಟ್ಟ ಮತ್ತು ಸುರಕ್ಷತಾ ಮಾನದಂಡಗಳನ್ನು ಮೌಲ್ಯಮಾಪನ ಮಾಡಿ, ಎಲ್ಲಾ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಮಹತ್ವವನ್ನು ಒತ್ತಿ ಹೇಳಿದರು.



ಮಹಾಪ್ರಬಂಧಕರು ಕಾರ್ಯಾಗಾರದ ಸಿಬ್ಬಂದಿಯೊಂದಿಗೆ ಸಂವಹನ ನಡೆಸಿ, ಅವರ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ನೀಡುವ ಭರವಸೆ ನೀಡಿದರು. ಸಿಬ್ಬಂದಿಯ ಶ್ರಮ ಮತ್ತು ಕಾರ್ಯಕ್ಷಮತೆಯನ್ನು ಅವರು ಶ್ಲಾಘಿಸಿದರು.


ನಂತರ ಅಧಿಕಾರಿಗಳೊಂದಿಗೆ ಸಭೆ ನಡೆಸಿ, ಕಾರ್ಯಾಚರಣಾ ದಕ್ಷತೆ, ಪ್ರಮುಖ ವಿಷಯಗಳು ಮತ್ತು ಕಾರ್ಯಾಗಾರದ ಕಾರ್ಯಕ್ಷಮತೆಯನ್ನು ಮತ್ತಷ್ಟು ಸುಧಾರಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.



ಪರಿಶೀಲನೆಯ ಭಾಗವಾಗಿ, ಅವರು ಮೈಸೂರು ರೈಲು ನಿಲ್ದಾಣ, ಅಶೋಕಪುರಂ ರೈಲು ನಿಲ್ದಾಣ, ಮೈಸೂರು ನ್ಯೂ ಗುಡ್ಸ್ ಟರ್ಮಿನಲ್ ಹಾಗೂ ಮೈಸೂರು ರೈಲ್ವೆ ವಸತಿ ಗೃಹಗಳನ್ನು ಸಹ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಮೈಸೂರು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಮುದಿತ್ ಮಿತ್ತಲ್, ಹೆಚ್ಚುವರಿ ವಿಭಾಗೀಯ ವ್ಯವಸ್ಥಾಪಕ ಶಮ್ಮಾಸ್ ಹಮೀದ್ ಹಾಗೂ ಇತರ ವಿಭಾಗೀಯ ಅಧಿಕಾರಿಗಳು ಉಪಸ್ಥಿತರಿದ್ದರು.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!