BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದಕ್ಷಿಣ ಕನ್ನಡ

ಲೋಹ ಬೆರೆಸಿದ ಆಭರಣ ಬ್ಯಾಂಕಿನಲ್ಲಿಟ್ಟು ವಂಚನೆ ಯತ್ನ, ಇಬ್ಬರು ಆರೋಪಿಗಳು ಕಡಬ ಪೊಲೀಸ್ ವಶಕ್ಕೆ

ಪುತ್ತೂರು, ಜುಲೈ 06 : ಚಿನ್ನದ ಆಭರಣಗಳಿಗೆ ಲೋಹ ಬೆರೆಸಿದ ಆಭರಣಗಳನ್ನು ಬ್ಯಾಂಕಿನಲ್ಲಿ ಅಡವಿಟ್ಟು ಬ್ಯಾಂಕ್ ಅಧಿಕಾರಿಗಳನ್ನು ವಂಚಿಸಲು ಯತ್ನಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬದಲ್ಲಿ ಬೆಳಕಿಗೆ ಬಂದಿದೆ. 


ಈ ಸಂಬಂಧ ಇಬ್ಬರು ಆರೋಪಿಗಳನ್ನು ಕಡಬ ಪೊಲೀಸರು ಬಂಧಿಸಿದ್ದು ಉಪ್ಪಿನಂಗಡಿ ನಿವಾಸಿ ಮಹಮ್ಮದ್ ಫಾಯಿಝ್ (20) ಹಾಗೂ ಬಂಟ್ವಾಳ ಕಸಬಾ ನಿವಾಸಿ ಮೊಹಮ್ಮದ್ ಮುರ್ಷೀದ್ (45) ಬಂಧಿತ ಆರೋಪಿಗಳಾಗಿದ್ದಾರೆ.

   ಇವರು ಕಡಬದ  ಬ್ಯಾಂಕ್ ಒಂದರಲ್ಲಿ ಲೋಹ ಬೆರೆಸಿ  ಕೃತಕವಾಗಿ ತೂಕ ಹೆಚ್ಚಿಸಲಾದ ಚಿನ್ನದ ಆಭರಣಗಳನ್ನು ಅಡವಿಡಲು ಯತ್ಸಿಸುತ್ತಿದ್ದಾಗ ಸಿಕ್ಕಿ ಬಿದ್ದಿದ್ದಾರೆ. 

ಜುಲೈ 3ರ ಶುಕ್ರವಾರ ಸಾಯಂಕಾಲದ ವೇಳೆ ಕಡಬ ಪೇಟೆಯ ಆಸುಪಾಸಿನಲ್ಲಿ ಇಬ್ಬರು ವ್ಯಕ್ತಿಗಳು ಅತ್ಯಂತ ಸಂಶಯಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ  ಮಾಹಿತಿ ಪಡೆದ ಕಡಬ ಪೊಲೀಸರು ಆ ವ್ಯಕ್ತಿಗಳನ್ನು ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಈ ಕೃತ್ಯ ಬೆಳಕಿಗೆ ಬಂದಿದೆ. 

ಆರೋಪಿಗಳ ಬಳಿಯಿದ್ದ ಚಿನ್ನದಂತೆ ಕಾಣುವ ಆಭರಣಗಳನ್ನು ವಶಕ್ಕೆ ಪಡೆದ ಪೊಲೀಸರು ಪರಿಶೀಲಿಸಿದಾಗ ಆಭರಣವು ಸಾಮಾನ್ಯ ಚಿನ್ನಕ್ಕಿಂತ ಅತ್ಯಂತ ಭಾರಿ ತೂಕ ಹೊಂದಿತ್ತು. ಆಭರಣಗಳ ಒಳಭಾಗಕ್ಕೆ ಯಾವುದೋ ಲೋಹ ಸೇರಿಸಿ, ಕೃತಕವಾಗಿ ಹೆಚ್ಚು ತೂಕ ಬರುವಂತೆ ಮಾರ್ಪಡಿಸಿರುವುದು ಕಂಡು ಬಂದಿದೆ. ಬ್ಯಾಂಕ್‌ಗಳು ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳು ಚಿನ್ನದ ಸಾಲ ನೀಡುವ ಮುನ್ನ ಎಚ್ಚರಿಕೆ ವಹಿಸುವಂತೆ ಪೊಲೀಸರು ಸೂಚಿಸಿದ್ದಾರೆ.  ಸಾರ್ವಜನಿಕ ವಲಯದಲ್ಲೂ ಇಂತಹ ಅಕ್ರಮ ಅಥವಾ ನಕಲಿ ಜಾಲಗಳ ಬಗ್ಗೆ ಮಾಹಿತಿ ದೊರೆತರೆ ತಕ್ಷಣ ಪೊಲೀಸರಿಗೆ ಮಾಹಿತಿ ನೀಡುವಂತೆ ಮನವಿ ಮಾಡಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!