BREAKING
[ಹೋಮ್] ರಾಜ್ಯ
[ಹೋಮ್] ದೇಶ
[ಹೋಮ್] ವಿದೇಶ
[ಹೋಮ್] ಕ್ರೀಡೆ
[ಹೋಮ್] ಸಿನಿಮಾ
[ಹೋಮ್] ಉಡುಪಿ
[ಹೋಮ್] ದಕ್ಷಿಣ ಕನ್ನಡ
ದಕ್ಷಿಣ ಕನ್ನಡ

Mangalore ಮಂಗಳೂರು ನಾಗುರಿ ದುರ್ಘಟನೆಗೆ ಜಿಲ್ಲಾಡಳಿತ ನೇರ ಹೊಣೆ - ಡಿವೈಎಫ್‌ಐ

ಮಂಗಳೂರು, ಜುಲೈ 01 : ಮಂಗಳೂರು ನಾಗುರಿ ದುರ್ಘಟನೆಗೆ ಜಿಲ್ಲಾಡಳಿತ ನೇರ ಹೊಣೆ ಎಂದು ಡಿವೈಎಫ್‌ಐ ಆರೋಪಿಸಿದೆ.



ಜಿಲ್ಲಾಡಳಿತ ಈ ಬಾರಿಯ ಮಳೆಗಾಲ ಎದುರಿಸುವ ಬಗ್ಗೆ ತೆಗೆದುಕೊಳ್ಳುವ ಮುನ್ಸೂಚನಾ ಕ್ರಮ, ಎಚ್ಚರಿಕೆಗಳೆಲ್ಲವೂ ಕಚೇರಿಯಲ್ಲೇ ಕೂತು ಕೇವಲ ಪತ್ರಿಕಾ ಹೇಳಿಕೆಗಷ್ಟೇ ಸೀಮಿತಗೊಳಿಸಿದರೇ ಹೊರತು ಜನರ ಬಳಿಗೆ ತೆರಳಲೇ ಇಲ್ಲ ಎಂದು ಡಿವೈಎಫ್‌ಐ ದ.ಕ ಜಿಲ್ಲಾ ಘಟಕ ಆರೋಪಿಸಿದೆ. 


ಈ ಬಗ್ಗೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಡಿವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ಸಂತೋಷ್ ಬಜಾಲ್ ಅಂತಹ ಅಪಾಯಕಾರಿ ಪ್ರದೇಶಗಳನ್ನು ಗುರುತಿಸಿ ಜನರನ್ನು ಎಚ್ಚರಿಸುವ, ಬೇರೆಡೆಗೆ ಸ್ಥಳಾಂತರಿಸುವ ಅಗತ್ಯ ಕ್ರಮಗಳನ್ನು ದಕ್ಷಿಣ ಕನ್ನಡ ಜಿಲ್ಲಾಡಳಿತ ಕೈಗೊಳ್ಳಲೇ ಇಲ್ಲ‌. ಉತ್ತರಕನ್ನಡದ ಶಿರೂರು, ಕೇರಳದ ವಯನಾಡು ದುರಂತದ ನಂತರ ಗುಡ್ಡ ಕುಸಿತ, ಇಳಿಜಾರು ಪ್ರದೇಶದ ಅಪಾಯಕಾರಿ ಮನೆಗಳನ್ನು ಗುರುತಿಸಿ ಸುರಕ್ಷಿತಾ ಸ್ಥಳಗಳಿಗೆ ತೆರಳಲು ಕ್ರಮಕೈಗೊಳ್ಳಬೇಕೆಂಬ ನಿರ್ದೇಶನವಿದ್ದರೂ ಈ ಕೆಲಸಗಳನ್ನು ಜಿಲ್ಲಾಡಳಿತದ ಯಾವೊಂದು ಇಲಾಖೆಗಳು ಮಾಡದಿರುವುದು ಖಂಡನೀಯ ಎಂದಿದ್ದಾರೆ. 

ನಗರದ ನಾಗುರಿಯಲ್ಲಿ ಪ್ರಾಣವನ್ನು ಕಳೆದುಕೊಂಡ ಸಂತ್ರಸ್ತ ಕುಟುಂಬಗಳಿಗೆ ಗರಿಷ್ಟ ಪ್ರಮಾಣದ ಆರ್ಥಿಕ ಪರಿಹಾರ ಘೋಷಿಸಬೇಕು. ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆಯನ್ನು ಒದಗಿಸಿಕೊಡಬೇಕು. ಸಂತ್ರಸ್ತ ನಾಲ್ಕೂ ಕುಟುಂಬಗಳು ಬಾಡಿಗೆ ಮನೆ ವಾಸಿಗಳು ಆಗಿರೋದರಿಂದ ಪಾಲಿಕೆ ಆಡಳಿತ ಸಂತ್ರಸ್ತ ಕುಟುಂಬಗಳಿಗೆ ಉಳಿದುಕೊಳ್ಳಲು ಪರ್ಯಾಯಾ ವ್ಯವಸ್ಥೆ ಹಾಗೂ ಮನೆ ನಿವೇಶನ ಒದಗಿಸಲು ಕ್ರಮಕೈಗೊಳ್ಳಬೇಕು ಎಂದು ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ. 


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!