BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ರಾಜ್ಯ

Chamarajanagar ಹೆಚ್ಚುತ್ತಿದೆ ವನ್ಯಮೃಗ ಮಾನವ ಸಂಘರ್ಷ, ಚಾಮರಾಜನಗರಲ್ಲಿ ಅಜ್ಜಿ ಮೊಮ್ಮಗಳ ಮೇಲೆ ಚಿರತೆ ದಾಳಿ

 ಚಾಮರಾಜ ನಗರ , ಜುಲೈ 06 : ಇತ್ತೀಚೆಗೆ ವನ್ಯ ಮೃಗಗಳು ಮತ್ತು ಮಾನವ ಸಂಘರ್ಷ ಹೆಚ್ಚುತ್ತಿದೆ. ಕರ್ನಾಟದಲ್ಲೂ ಈ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದೆ.  ನೇರವಾಗಿ ಕಾಡು ಪ್ರಾಣಿಗಳು ಮಾನವರ ದಾಳಿ ಮಾಡಲಾರಂಭಿಸಿವೆ.  ಚಾಮರಾಜ ನಗರದಲ್ಲೂ ಈ ಘಟನೆ ನಡೆದಿದ್ದು ಚಿರತೆಯೊಂದು ಅಜ್ಜಿ ಮತ್ತು ಪುಟ್ಟ ಮೊಮ್ಮಗಳ ಮೇಲೆ ಭೀಕರ ದಾಳಿ ನಡೆಸಿದೆ. 



ಚಾಮರಾಜನಗರ ಜಿಲ್ಲೆಯ ತಟ್ಟೆಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಚಿರತೆಯೊಂದು ಮನೆಯ ಮುಂದೆ ಕುಳಿತಿದ್ದ ಅಜ್ಜಿ ಶಿವಮ್ಮ ಮತ್ತು ಐದು ವರ್ಷದ ಮೊಮ್ಮಗಳು ಹರ್ಷಿತಾ ಮೇಲೆ ದಾಳಿ ನಡೆಸಿದೆ. 

ಮೊದಲು ಚಿರತೆ ಶಿವಮ್ಮ ಅವರ ಮೇಲೆ ದಾಳಿ ಮಾಡಿದೆ. ಇವರು ಕಿರುಚಾಡಿಕೊಂಡಿದ್ದರಿಂದ ಪುಟ್ಟ ಮೊಮ್ಮಗಳು ಮನೆಯಿಂದ ಹೊರಗಡೆ ಬಂದಿದ್ದಾರೆ. ಈ ವೇಳೆ ಬಾಲಕಿ ಮೇಲೆಯೂ ಚಿರತೆ ದಾಳಿ ನಡೆಸಿದೆ. ಬಾಲಕಿ, ಅಜ್ಜಿಯ ಕಿರುಚಾಟ ಕೇಳಿ ಸುತ್ತಮುತ್ತಲಿನವರು  ಓಡಿಬಂದಾಗ ಚಿರತೆ ಸ್ಥಳದಿಂದ ಪರಾರಿಯಾಗಿದೆ. ತಕ್ಷಣ ಇಬ್ಬರೂ ಗಾಯಾಳುಗಳಿಗೆ ಕೂಡ್ಲೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಬೇರೆ ಕಾಮಗೆರೆಯ ಹೋಲಿ ಆಸ್ಪತ್ರೆಯಲ್ಲಿ ದಾಖಲು ಮಾಡಲಾಗಿದೆ. 

ತಕ್ಷಣವೇ ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ಜಿತೇಂದ್ರ ಹಾಗೂ ಸಿಬ್ಬಂದಿ ಮನೆಯ ಸುತ್ತಲು ಪರಿಶೀಲನೆ ನಡೆಸಿದ್ದಾರೆ. ಚಿರತೆ ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

ಕಾಡಂಚಿನ ಗ್ರಾಮಗಳಲ್ಲಿ ವನ್ಯಮೃಗಗಳ ಹಾವಳಿ ಹೆಚ್ಚಾಗಿದ್ದರೂ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!