BREAKING
ರಾಜ್ಯ
ದೇಶ
ವಿದೇಶ
ಕ್ರೀಡೆ
ಸಿನಿಮಾ
ಉಡುಪಿ
ದಕ್ಷಿಣ ಕನ್ನಡ

Mangaluruವಾಹನ ಸವಾರರೇ ಗಮನಿಸಿ, ಟ್ರಾಫಿಕ್ ದಂಡದಲ್ಲಿ ಶೇ.50 ರಿಯಾಯಿತಿ: ಜುಲೈ 10 ಕೊನೆಯ ದಿನ

ಮಂಗಳೂರು, ಜುಲೈ 08 : ಟ್ರಾಫಿಕ್ ದಂಡದಲ್ಲಿ ಶೇ.50 ರಿಯಾಯಿತಿಯ ಕೊನೆಯ ಅವಕಾಶ ಜುಲೈ 10  ಆಗಿದ್ದು  ಕೊನೆಯ ದಿನವಾಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಅವರು  ಹೇಳಿದ್ದಾರೆ.



 ಸಾರಿಗೆ ಇಲಾಖೆಯಲ್ಲಿ 1991 ರಿಂದ 2022ರ ಅವಧಿಯಲ್ಲಿ ದಾಖಲಾದ ಹಾಗೂ ಪೆÇಲೀಸ್ ಇಲಾಖೆಯ ಟ್ರಾಫಿಕ್ ಚಲನ್‍ನಲ್ಲಿ ಮೇ 2026 ಕ್ಕಿಂತ ಮೊದಲು ದಾಖಲಾದ ಪ್ರಕರಣಗಳ ದಂಡದ ಮೊತ್ತದಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ.

     ಈ ರಿಯಾಯಿತಿಯು ಮುಂಬರುವ ರಾಷ್ಟ್ರೀಯ ಲೋಕ ಅದಾಲತ್ ಜುಲೈ 11  ರ ಸಂಬಂಧ ಆದೇಶಿಸಲಾಗಿದ್ದು,  ಜೂನ್ 21 ರಿಂದ  ಜುಲೈ 10 ರವರೆಗೆ ಮಾತ್ರ ಅನ್ವಯವಾಗುತ್ತದೆ. ಆದುದರಿಂದ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಂಡು ಮೇಲೆ ಕಾಣಿಸಿದ ಅವಧಿಯಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಶೇ.50 ರಿಯಾಯಿತಿಯಲ್ಲಿ ದಂಡ ಪಾವತಿಸುವ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥ ಪಡಿಸಿಕೊಳ್ಳಲು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಜೈಬುನ್ನಿಸಾ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


📢 ಸುದ್ದಿವಾಣಿ WhatsApp — ತಕ್ಷಣದ ಬ್ರೇಕಿಂಗ್ ನ್ಯೂಸ್ ಪಡೆಯಿರಿ!